ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಮೌನ ಮಕ್ಕಳ ಧಮನಿಯಲ್ಲಿ ಉಕ್ಕಲಿದೆ ಯಕ್ಷ ವಾರಿಧಿ

ಲೇಖಕರು : ಚೇತನ್ ಪಿಲಿಕುಳ
ಶುಕ್ರವಾರ, ಒಕ್ಟೋಬರ್ 25 , 2013

ಈ ಮಕ್ಕಳಿಗೆ ಕಿವಿ ಕೇಳಿಸೋದಿಲ್ಲ. ಮಾತು ಬರೋದಿಲ್ಲ. ವಾಕ್-ಶ್ರವಣ ದೋಷ ಇರುವ ವಿಶೇಷ ಮಕ್ಕಳಿವರು. ಆದರೆ ಇವರು ಮಾಡಲು ಹೊರಟಿರುವ ಕೆಲಸದ ಬಗ್ಗೆ ನೋಡಿದರೆ ಆಶ್ಚರ್ಯವಾಗುತ್ತದೆ! ಇದು ಸಾಧ್ಯನಾ ಎಂಬ ಆತಂಕವೂ ಮೂಡುತ್ತದೆ. ಆದರೂ ಇದು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಲು ಹೊರಟಿದ್ದಾರೆ ಈ ಮಕ್ಕಳು. ಅವರ ಕೈಯಿಂದ ಅಸಾಧಾರಣ ಕೆಲಸ ಮಾಡಿಸಲು ಹೊರಟಿದ್ದಾರೆ ಗುರುಗಳು.

ಮಾತಿನಲ್ಲೇ ಮಂಟಪ ಕಟ್ಟುವ, ಅಭಿನಯದಲ್ಲಿ ಹೊಸ ಲೋಕ ಸೃಷ್ಟಿಸುವ ಯಕ್ಷಗಾನ ಕಲೆಗೆ ವಾಕ್-ಶ್ರವಣ ಎರಡೂ ಶಕ್ತಿ ತೀರಾ ಅಗತ್ಯ. ವಿಶೇಷವೆಂದರೆ ಇವೆರಡೂ ಇಲ್ಲದ ವಿಶೇಷ ಮಕ್ಕಳು ಯಕ್ಷಗಾನ ಮಾಡಲು ಹೊರಟು ನಿಂತಿದ್ದಾರೆ. ಇದಕ್ಕಾಗಿಯೇ ಆರು ತಿಂಗಳಿಂದ ಕಠಿನ ಅಭ್ಯಾಸದಲ್ಲಿ ತೊಡಗಿದ್ದಾರೆ.

ವಿಶೇಷವಾದರೂ ಇದು ಸತ್ಯ! ವಾಮಂಜೂರಿನ ಎಸ್.ಡಿ.ಎಂ, ಮಂಗಳಜ್ಯೋತಿ ಶಾಲೆಯಲ್ಲಿ ಈ ತರಬೇತಿ ನಡೆಯುತ್ತಿದೆ. ಶಂಕರನಾರಾಯಣ ಮೈರ್ಪಾಡಿ ಅವರು ಗುರುಗಳಾಗಿ ಈ ಮಕ್ಕಳಲ್ಲಿ ಯಕ್ಷ ಪ್ರತಿಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಡಿಸೆಂಬರ್ 7ರಂದು ಮಧ್ಯಾಹ್ನ ಮೂರು ಗಂಟೆಗೆ ಮಂಗಳೂರಿನ ಪುರಭವನದಲ್ಲಿ ''ಮಹಿಷ ಮರ್ದಿನಿ'' ಪ್ರಸಂಗದಲ್ಲಿ ವಾಕ್ ಶ್ರವಣ ಸಮಸ್ಯೆಯ ಮಕ್ಕಳು ಅಭಿನಯಿಸಲಿದ್ದಾರೆ.

ಇದೊಂದು ಚಾಲೆಂಜ್: ವಾಕ್ ಶ್ರವಣ ಸಮಸ್ಯೆ ಇರುವ ಮಕ್ಕಳ ಕೈಯಿಂದ ಯಕ್ಷಗಾನ ಮಾಡಿಸೋದು ಒಂಥರಾ ಚಾಲೆಂಜಿಗ್. ಕಾರಣ ಯಕ್ಷಗಾನದಲ್ಲಿ ಮಾತೇ ಬಂಡವಾಳ. ಜತೆಗೆ ಭಾಗವತರ ಪದ್ಯ, ತಾಳಕ್ಕೆ ತಕ್ಕಂತೆ ಅಭಿನಯ ಮಾಡಬೇಕು. ಆದರೆ ಕಿವಿ ಕೇಳದ, ಮಾತು ಬಾರದ ಮಕ್ಕಳು ಇದನ್ನು ಹೇಗೆ ಮಾಡಲು ಸಾಧ್ಯ?! ಇಲ್ಲೇ ಇದೆ ಛಾಲೆಂಜ್!

ಗಜಾನನ ಹೆಗಡೆ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ವಾಕ್ ಶ್ರವಣ ನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯ ವಾಕ್ ಶ್ರವಣ ದೋಷವುಳ್ಳ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವ ಯೋಚನೆ ಹುಟ್ಟಿದ ಬೆನ್ನಲ್ಲೇ ಇಂಥ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಿದರೆ ಉತ್ತಮ ಎನ್ನುವ ಐಡಿಯಾವೂ ಹೊಳೆಯಿತು. ಪಣಂಬೂರು ಪದ್ಮನಾಭಯ್ಯ ಶ್ಯಾನ್'ಭೋಗ್ ಕಲಾ ಪರಿಷತ್'ನ ಸ್ಥಾಪಕ ಶಂಕರನಾರಾಯಣ ಮೈರ್ಪಾಡಿ ಅವರನ್ನು ಮಕ್ಕಳಿಗೆ ನಾಟ್ಯ ಕಲಿಸಲು ಕೇಳಿಕೊಂಡಾಗ ಇದೊಂದು ಅದ್ಭುತ ಅವಕಾಶ ಎನ್ನುವಂತೆ ಸಂತೋಷದಿಂದ ಒಪ್ಪಿಕೊಂಡರು. ಹೀಗಾಗಿ ಆರು ತಿಂಗಳಿನಿಂದ ನಾಟ್ಯ ತರಬೇತಿ ನೀಡುತ್ತಿದ್ದಾರೆ. ಮಂಗಳಜ್ಯೋತಿ ಶಾಲೆಯಲ್ಲಿ ಪ್ರತೀ ಶನಿವಾರ ಹಾಗು ಇತರೆ ರಜಾದಿನಗಳಲ್ಲಿ ತರಬೇತಿ ನಡೆಯುತ್ತಿದ್ದು ಸ್ವತಃ ಶಂಕರನಾರಾಯಣರು ಚೆಂಡೆ ಬಾರಿಸಿಕೊಂಡು ಮಕ್ಕಳಿಗೆ ನಾಟ್ಯ ತರಬೇತಿ ನೀಡುತ್ತಿದ್ದಾರೆ.

ತರಬೇತಿ ವಿಧಾನ ಹೇಗೆ... ಕಿವಿ ಕೇಳೋದಿಲ್ಲ, ಬಾಯಿ ಬರೋದಿಲ್ಲ. ಇಂತಹ ಮಕ್ಕಳಿಗೆ ಕಲಿಸೋದು ಹೇಗೆ? ಭಾಗವತರ ತಾಳ, ಪದ್ಯ ಅರ್ಥವಾಗಬೇಕಾದರೆ ಕಿವಿ ಕೇಳಬೇಕು. ಅರ್ಥಗಾರಿಕೆ ಮಾಡಲು ಮಾತು ಬರಬೇಕು. ಈ ಮಕ್ಕಳಿಗೆ ಎರಡೂ ಅಸಾಧ್ಯ. ಹೀಗಾಗಿ ಶಂಕರ್ ನಾರಾಯಣರು ಆಯ್ದುಕೊಂಡ ಪ್ರಮುಖ ಮಾರ್ಗ ಲಿಪ್ಸ್ ಮೂವ್'ಮೆಂಟ್ (ತುಟಿಯ ಚಲನೆ). ತಾಳದ ಲಯದ ಕುರಿತು ತುಟಿಯ ಚಲನೆಯ ಮೂಲಕ ಯಾವ ತಾಳವನ್ನು ಹೇಳುತ್ತಿದ್ದಾರೆ ಅನ್ನೋದನ್ನು ಅನುಕರಿಸಿ ಈ ಮಕ್ಕಳು ನಾಟ್ಯ ಕಲಿಯುತ್ತಿದ್ದಾರೆ. ತಂಡದಲ್ಲಿ ವಾಕ್ ಶ್ರವಣ ದೋಷದ ಮಕ್ಕಳ ಜತೆಗೆ ಸಾಮಾನ್ಯ ಮಕ್ಕಳೂ ಇದ್ದಾರೆ. ಅವರ ಅಭಿನಯವನ್ನು ಈ ಮಕ್ಕಳು ಅನುಕರಿಸುತ್ತಾರೆ.

''ಮಹಿಷ ಮರ್ದಿನಿ'' ಒಂದೂವರೆ ಗಂಟೆಯ ಪ್ರಸಂಗ. 20 ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದಾರೆ. ವಾಕ್ ಶ್ರವಣ ದೋಷಪೂರಿತ ಮಕ್ಕಳ ಜತೆಗೆ ಸಾಮಾನ್ಯ ಮಕ್ಕಳು ವೇಷ ಹಾಕಲಿದ್ದಾರೆ. ಕಾರಣ ಮಾತುಗಾರಿಕೆ ಇಲ್ಲದೆ ಯಕ್ಷಗಾನ ಅಸಾಧ್ಯ. ಹೀಗಾಗಿ ಮಾತಿನ ಭಾಗದ ಹೆಚ್ಚಿನ ವೇಷಗಳನ್ನು ಸಾಮಾನ್ಯ ಮಕ್ಕಳು ನಿಭಾಯಿಸಿದರೆ ಇನ್ನುಳಿದ ವೇಷಗಳಲ್ಲಿ ವಾಕ್ ಶ್ರವಣ ದೋಷವುಳ್ಳ ಮಕ್ಕಳು ನಿರ್ವಹಿಸಲಿದ್ದಾರೆ. ಮಹಿಷಾಸುರ ಸಭಾಗಮನದ ವೇಷವನ್ನು ವಾಕ್ ಶ್ರವಣ ದೋಷವುಳ್ಳ ಮಗು ಮಾಡಲಿದೆ ಅನ್ನೋದು ವಿಶೇಷ.

ಗುರುಗಳ ಬಗ್ಗೆ ಒಂದಿಷ್ಟು..

ಹಲವು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ಯಕ್ಷಗಾನ ಕಲಿಸಿ ಅಪಾರ ಶಿಷ್ಯವೃಂದ ಹೊಂದಿರುವ ಶಂಕರನಾರಾಯಣ ಮೈರ್ಪಾಡಿ ಅವರು ಪಣಂಬೂರು ಎನ್.ಎಂ.ಪಿ.ಟಿ ಉದ್ಯೋಗಿ. 38 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡಿರುವ ಇವರು ನಂದಕಲಾ ತಂಡದ ವ್ಯವಸ್ಥಾಪಕರಾಗಿ, ನವ ಮಂಗಳೂರು ಬಂದರಿನ ಸಾಂಸ್ಕೃತಿಕ ತಂಡವನ್ನು ಗುಜರಾತ್, ಒರಿಸ್ಸಾ, ಚೆನೆ, ಮುಂಬೈ, ಬೆಂಗಳುರು, ಮೈಸೂರು ಹೀಗೆ ಹಲವಾರು ಕಡೆ ಪರಿಚಯಿಸಿದ್ದಾರೆ. ಇವರು ಪಣಂಬೂರಿನ ಯಕ್ಷಗಾನ ಕಲಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ. "ಕಲೆ ಯಾರ ಸೊತ್ತೂ ಅಲ್ಲ. ಅದು ಆಸಕ್ತಿಯಿಂದ ಕಲಿತು ತನ್ನದಾಗಿಸಿಕೊಳ್ಳುವವನ ಸೊತ್ತು. ಇತರ ಯಕ್ಷಗಾನ ಕಲಾವಿದರನ್ನು ಕಂಡು ನನಗೂ ಇಂಥದೊಂದು ಅವಕಾಶ ಸಿಕ್ಕಿದರೆ ಚೆನ್ನಾಗಿತ್ತು ಎನ್ನುವ ಹಂಬಲದ ವಿದ್ಯಾರ್ಥಿಗಳಿಗೆ ಇಲ್ಲೊಂದು ವೇದಿಕೆ ಸಿಗುತ್ತಿದೆ" - ಎನ್ನುತ್ತಾರೆ ಅವರು.



ಕೃಪೆ : http://www.vijaykarnataka.indiatimes.com ,

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ